Tuesday, 27 January 2009

ಪತಂಗದಂತೆ ಹಾರಲು ಪ್ಯಾಪಿಲಾನ್ ಹತ್ತು ವರ್ಷ ಕಷ್ಟಪಟ್ಟ

ಪ್ಯಾಪಿಲಾನ್ ಅಂದರೆ ಫ್ರೆಂಚ್ ಭಾಷೆಯಲ್ಲಿ ಪತಂಗ. ಪ್ಯಾಪಿಲಾನ್ ನಿಜ ನಾಮಧೇಯ ಹೆನ್ರಿ ಛಾರೇರೆ. ಆತ ಇದ್ದದ್ದು ಜಗತ್ತಿಗೆ ನಾಗರೀಕತೆ ಪಾಠ ಮಾಡುವ ಸ್ವಚ್ಚಂದ ಫ್ರಾನ್ಸಿನಲ್ಲಿ. ಅದು ೧೯೩೩ನೇ ಇಸವಿ. ಎರಡನೇ ಮಹಾಯುಧ್ಧಕ್ಕು ಸ್ವಲ್ಪ ಮೊದಲಿನ ಕಾಲ. ಪ್ಯಾಪಿಲಾನ್ ಮಾಡಿದ ಒಂದು ಸಣ್ಣ ತಪ್ಪಿಗೆ ಅವನಿಗೆ ದೇಶಾಂತರ ಕಳುಹಿಸಿ ದ್ವೀಪವೊಂದರಲ್ಲಿ ಏಕಾಂತದ ಶಿಕ್ಷೆಗೆ ದೂಡುತ್ತಾರೆ ನಾಗರೀಕತೆಯ ಪಾಠ ಮಾಡಿದ ಜನ. ಅವರ ಮೇಲೆ ಸೇಡು ತೀರಿಸಿಯೇಕೊಳ್ಳಬೇಕೆಂದು ಪಲಾಯನದ ಕನಸು ಕಾಣುತ್ತಾನೆ ಪ್ಯಾಪಿ. ಅದು ನೆರವೇರಲು ಹತ್ತು ವರ್ಷ ಬೇಕಾಗುತ್ತದೆ. ಆ ಹತ್ತು ವರ್ಷಗಳಲ್ಲಿ ಆತ ಅದೇಗೆ ಆ ಪಲಾಯನದ ಆಸೆಯನ್ನು ಜೀವಂತವಾಗಿ ಇಟ್ಟುಕೊಂಡು ಸಾಧನೆಗೈಯುತ್ತಾನೆ ಎಂಬುದೇ ಒಂದು ಜೀವನ ಪಾಠ.
ಪ್ಯಾಪಿ ಜೈಲಿನಲ್ಲಿ ಹೊಸ ಅನಾಗರೀಕ ಪರಿಸರ ಕಾಣುತ್ತಾನೆ. ಅಂಡಿನಲ್ಲಿ ತೂರಿಸಿಕೊಂಡಿದ್ದ ಕೊಳವೆಯಲ್ಲಿನ ದುಡ್ಡಿನ ಆಸೆಗೆ ದಿನವೂ ನಡೆಯುವ ಕೊಲೆಗಳನ್ನು ಕರಳು ಬಗೆಯುವುದನ್ನೂ ಕಾಣುತ್ತಾನೆ. ಅಂತದ್ದರಲ್ಲೂ ಡೇಗ ಎನ್ನುವವನ ಕೊಳವೆಯನ್ನು ತನ್ನ ಅಂಡಿನಲ್ಲಿ ಇಟ್ಟುಕೊಂಡು ಆತನನ್ನೂ ಆತನ ಹಣವನ್ನೂ ರಕ್ಷಿಸಿ ಆತನ ಜೊತೆ ಪಲಾಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಪ್ರಯತ್ನಿಸಿ ಗುಜಿರ ಎನ್ನುವ ಬುಡಕಟ್ಟು ಜನರ ಜೊತೆ ಆರು ತಿಂಗಳು ಅವರಂತೆಯೇ ಬದುಕಿಬಿಡುತ್ತಾನೆ. ಅಲ್ಲಿ ಅವನಿಗೆ ಮನೆ, ಇಬ್ಬರು ಮುದ್ದು ಮಡಯನ ಮಾಡುವಾಗ ಸಿಕಿಬೀಳುತ್ತಾನೆ. ಹಾಗೆ ಇನ್ನೆರಡು ಪಲಾಯನ ಯತ್ನಗಳು ವಿಫಲವಾಗುತ್ತವೆ. ಆದರೂ ದಿಯರು, ಬದುಕಲು ಉದ್ಯೋಗ ಎಲ್ಲ ಇದ್ದರೂ ಇದಲ್ಲ ತಾನು ಬಯಸಿದ್ದೆಂದು ನೆನಪಾಪಿ ಮತ್ತೆ ಓಡುತ್ತಾನೆ. ಕ್ರೈಸ್ತ ಸನ್ಯಾಸಿನಿಯರನ್ನು ನಂಬಿ ಮೋಸ ಹೋಗಿ ಮತ್ತೆ ಜೈಲಿಗೆ ಹೋಗುತ್ತಾನೆ.
ಏಕಾಂತ ಶಿಕ್ಷೆ ಅನುಭವಿಸುತ್ತಾನೆ. ಯಾರ ಬಳಿಯೂ ಮಾತಿಲ್ಲದೇ ಮೂರು ವರ್ಷ ಕಳೆಯುತ್ತಾನೆ. ಒಂದೇ ಒಂದು ಬಾರಿ ಆತ ಅಲ್ಲಿತನಕ ಮಾತನಾಡಿದ್ದು! ಕತ್ತಲೆಯ ಕೋಣೆಯಲ್ಲಿ ಬದುಕುತ್ತಾನೆ. ಮತ್ತೆ ಪಲಾಯನದ ಕನಸು ಕಾಣುತ್ತಾನೆ. ವಿಧಿ ಮತ್ತೆ ಜೈಲಿಗೆ ತಳ್ಳುತ್ತದೆ. ಕಾಲು ಮುರಿಯುತ್ತದೆ. ಸ್ನೇಹಿತರ ಕೊಲೆಗಳನ್ನು ನೋಡುತ್ತಾನೆ. ದೋಣಿಯಲ್ಲಿ ಪಲಾಯನಕ್ಕೆ ಯತ್ನಿಸಿದರೆ ದೋಣಿಯೇ ಮುರಿಯುತ್ತದೆ. ಆದರೂ ಆತನ ಪಲಾಯನದ ಆಸೆ, ಸ್ವತಂತ್ರ ಜೀವನದ ಆಸೆ ಮಾತ್ರ ಕೊನೆಯಾಗುವುದಿಲ್ಲ.
ಒಮ್ಮೆಯಂತೂ ಅಧಿಕಾರಿಯ ಮಗಳನ್ನು ಶಾರ್ಕ್ ಮೀನುಗಳಿರುವ ಸಾಗರದಲ್ಲಿ ಜೀವದ ಹಂಗು ತೊರೆದು ರಕ್ಷಿಸಿ ಶಿಕ್ಷೆಯಿಂದ ಬಚಾವಾಗುತ್ತಾನೆ. ಪಲಾಯನಕ್ಕೆ ಅನುಕೂಲವಾಗಲೆಂದು ಹುಚ್ಚಾಸ್ಪತ್ರೆ ಸೇರುತ್ತಾನೆ. ಮತ್ತೆ ವಿಫಲ. ಇನ್ನೊಬ್ಬ ಮಿತ್ರನ ದಾರುಣ ಸಾವು. ಕಣ್ಣೆದುರಲ್ಲೇ ಶಾರ್ಕ್ ಮೀನುಗಳಿಗೆ ಆಹುತಿ. ಮತ್ತೆ ವಾಪಸ್ಸಾಗಿ ಮತ್ತೆ ಪ್ರಯತ್ನ.
ಅಂತೂ ಈ ಬಾರಿ ತೆಂಗಿನ ಕಾಯಿ ಚೀಲವನ್ನೇ ತೆಪ್ಪವನ್ನಾಗಿ ಬಳಸಿ ಶಾರ್ಕ್ ತುಂಬಿರುವ ಸಮುದ್ರದಲ್ಲಿ ೩ ದಿನ ನಿದ್ದೆಯಿಲ್ಲದೆ ತೇಲಾಡಿ ಒಂದು ದಡ ಸೇರುತ್ತಾನೆ. ಅಲ್ಲಿ ಅವನೊಡನೆ ಬಂದಿದ್ದ ಮಿತ್ರ ಕಣ್ಣೆದುರಲ್ಲೇ ಜವಳು ನೆಲದಲ್ಲಿ ಮುಳುಗಿ ಸಾಯುತ್ತಾನೆ. ಹಿಂದೆಲ್ಲ ಯಾಂತ್ರಿಕ ದೊನಿಗಳಿರುತ್ತವೆ, ನಾವೆಯಿರುತ್ತದೆ, ಜೊತೆಯಲ್ಲಿ ಜನರಿರುತ್ತಾರೆ, ಆದರೂ ಸಿಗದ ಸ್ವತಂತ್ರ ಈ ಬಾರಿ ತೆಂಗಿನ ಕಾಯಿಯ ಚೀಲದ ಮೇಲೆ ತೇಲುತ್ತಾ ದೊರಕಿಬಿಡುತ್ತದೆ. ಆ ದ್ವೀಪದಿಂದ ಹೊಸ ಗೆಳೆಯ ಕ್ವಿಕ್ ಕ್ವಿಕ್ ಜೊತೆ ಪಲಾಯನ ಮಾಡಿ ವೆನೆಜುವೆಲಾ ತಲುಪಿ ಅಂತೂ ಅಲ್ಲಿನ ಸ್ವತಂತ್ರ ಪ್ರಜೆಯಾಗಿ ಬದುಕುತ್ತಾನೆ ಪ್ಯಾಪಿ.
ಎರಡು ಭಾಗಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಅನುವಾದಿಸಿದ್ದಾರೆ. ಓದಲೇ ಬೇಕಾದ ಪುಸ್ತಕ. ಸಾಹಿತ್ಯಿಕವಾಗಿ ಏನಿಲ್ಲದಿದ್ದರೂ ಹತ್ತು ವರ್ಷವಾಗಲೀ, ಇಪ್ಪತ್ತಾಗಲಿ, ಯಾರೇ ಅಡ್ಡ ಬರಲಿ, ವಿಧಿಯೇ ಬಾಧಿಸಲಿ; ವಿಧಿಯನ್ನೇ ಸೋಲಿಸಿ ಗುರಿ ತಲಪುವ ಮಾರ್ಗ ತೋರಿಸುವ ಪುಸ್ತಕ. ನಿಜಕ್ಕೂ ಅದ್ಭುತ ಸಾಹಸ. ಪ್ಯಾಪಿಗಿರುವ ಅರ್ಧ ಛಲ, ಸಹನೆ, ಗುರಿ ನಮಗಿದ್ದರೆ ಏನನ್ನಾದರೂ ಸಾಧಿಸಬಲ್ಲೆವು.
Keywords: Papillon, Henri Charrière, Purnachandra Tejaswi, Kannada Book review, World war 2, French, France, Boat, Ship, Shark

No comments:

Search Rising Indian


Related Posts Plugin for WordPress, Blogger...