"ನೀವು ಯಾವುದೇ ಚರಿತ್ರೆಯ ಪುಸ್ತಕ ತೆರೆದರೂ ಅದರ ಮೊದಲ ಪುಟದಲ್ಲೇ ಭಾರತದ ಪ್ರಸ್ತಾಪ ಇರಲೇಬೇಕು. ಒಂದೊಮ್ಮೆ ಇಲ್ಲವೆಂದಾದರೆ ಆ ಪುಸ್ತಕದ ಲೇಖಕ ಉದ್ಧೇಶಪೂರ್ವಕವಾಗಿಯೇ ಸೇರಿಸಿಲ್ಲ ಅಥವಾ ಮೊದಲ ಪುಟ ಹರಿದು ಹೋಗಿದೆ ಎಂದೇ ಅರ್ಥ." ಹೀಗೆ ಶುರು ಆಗುತ್ತದೆ ಭಾರತ ದರ್ಶನ.
ನಾನು ಚಿಕ್ಕವನಿದ್ದಾಗ ಗೋಕರ್ಣದ ಸಮೀಪದ ನನ್ನ ಅಜ್ಜಿಯ ಮನೆಯ ಪಕ್ಕದಲ್ಲಿದ್ದ ಸಾರಸ್ವತ ಹಿರಿಯರೊಬ್ಬರು ಅವರ ಹಳೆಯ ಟೇಪ್ ರಿಕಾರ್ಡರ್ ಸ್ವಚ್ಚಗೊಳಿಸಿ ಅದರಲ್ಲಿ ಭಾರತ ದರ್ಶನದ ಒಂದೊಂದೇ ಭಾಗ ಕ್ಯಾಸೆಟ್ ಹಾಕಿ ಕೇಳಿಸುತ್ತಿದ್ದರು. ಅವರಿಗೆ ಅದರಿಂದ ಆಗುವ ವಯಕ್ತಿಕ ಲಾಭ ಏನೂ ಇರಲಿಲ್ಲ. ಭಾವಿ ಭಾರತದ ನಾಗರೀಕನಿಗೆ ಭಾರತದ ದರ್ಶನ ಮಾಡಿಸುವುದರಲ್ಲೇ ಅವರಿಗೆ ನೆಮ್ಮದಿಯಿತ್ತು. ಆರೆಸೆಸ್ಸ್ ಹಿರಿಯರ ದೇಶಪ್ರೇಮ ಅದಾಗಿತ್ತು.
ನಿಮ್ಮಲ್ಲೆಸ್ಟು ಜನ ಭಾರತ ದರ್ಶನ ಮಾಡಿದ್ದೀರಿ? ಸ್ಲಂ ಡಾಗ್ ಆಗಲೀ, ಬಿಳಿ ಹುಲಿಯಾಗಲೀ ಭಾರತ ದರ್ಶನ ಮಾಡಿಸುವುದಿಲ್ಲ. ಭಾರತವೆಂದರೆ ಬೇರೆಯದೇ ಇದೆ. ಒಮ್ಮೆ "ಭಾರತ ದರ್ಶನ" ಮಾಡಿರಿ. ರೋಗಿಸ್ಟ ಭಾರತ ಎಂದು ಇಲ್ಲೆ ಹೀಗೆಳೆಯುವುದಿಲ್ಲ. ಅದನ್ನು ನೋಡಿದ ಸ್ವಾಮಿ ವಿವೇಕಾನಂದರು ಅದೇಗೆ ಭಾರತವನ್ನು ಮತ್ತಷ್ಟು ಪುನೀತರಾಗಿಸಿದರು ಎನ್ನುವುದನ್ನು ಹೇಳುತ್ತದೆ- ಭಾರತ ದರ್ಶನ. ನಾವೂ ಭಾರತಾಂಬೆಯ ಹೆಮ್ಮೆಯ ಪುತ್ರರಾಗುವುದು ಹೇಗೆಂದು ಕಲಿಸುತ್ತದೆ ಭಾರತ ದರ್ಶನ.
ಆರೆಸ್ಸೆಸ್ಸ್, ವಿಶ್ವ ಹಿಂದೂ ಪರಿಷತ್ ಗಳನ್ನು ಭಯೋತ್ಪಾದಕರು ಎಂದು ಕರೆಯುವ ಸಿನ್ನೆನ್ನ್ ಐಬಿಎನ್ ರಾಜದೀಪ್ ಸರ್ದೇಸಾಯಿಗೆ ಭಾರತ ಎಂದರೇನೆಂದು ಕೇಳಿ ನೋಡಿ. ಕಮ್ಯುನಿಸ್ಟ್ ಕನ್ನಡಕ ಹಾಕಿಕೊಂಡು ನೋಡಿದ ಭಾರತದ ಬಗ್ಗೆ ಮಾತನಾಡುತ್ತಾನೆ. ಆದರೆ ಅದಲ್ಲ ಭಾರತ. ನನ್ನ ಭಾರತ ಬೇರೇನೆ ಇದೆ. ಭಾರತ ದರ್ಶನ ಮಾಡಿಸಿದವರಿಗೆ ಟೆರ್ರರಿಸ್ಟ್ ಪಟ್ಟ ಕಟ್ಟಿ ಸಿಮಿಯಂಥ ಕ್ರಿಮಿಗೆ ಹೋಲಿಸುವ ಮಾಧ್ಯಮಗಳಿಗೆ ಏನು ಗೊತ್ತು ಭಾರತದ ಬಗ್ಗೆ.
ನಿಮಗೂ ಭಾರತದ ದರ್ಶನ ಮಾಡುವ ಆಸೆಯೇ? ಆರು ಭಾಗಗಳಲ್ಲಿ ಇಡೀ ಭಾರತದ ದರ್ಶನ ಮಾಡಿ. ಭಾರತ ದರ್ಶನ ವಿಶ್ವ ಹಿಂದೂ ಪರಿಷತ್ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. ಭಾರತದ ಇತಿಹಾಸ, ವರ್ತಮಾನ, ಭವಿಷ್ಯ ಎಲ್ಲವನ್ನೂ ಕೇಳಿ ತಿಳಿದು ಒಂದೈದು ನಿಮಿಷ ನಿಮ್ಮ ಬಗ್ಗೆ ಯೋಚಿಸಿ. ಆಗ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಅನಿಸದಿದ್ದರೆ ಹೇಳಿ. ಭಾರತದಲ್ಲಿ ಹುಟ್ಟುವುದೇ ಹೆಮ್ಮೆ! ಭಾರತಿಯರಾಗಿ ಜನಿಸುವುದೇ ಒಂದು ಪುಣ್ಯ.
ಭಾರತ ದರ್ಶನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಲಭ್ಯವಿದೆ.
೫೯ನೇ ಗಣರಾಜ್ಯೋತ್ಸವದ ಶುಭಾಶಯಗಳು. ಭಾರತಕ್ಕೆ, ಭಾರತೀಯರಿಗೆ ಒಳ್ಳೆಯದಾಗಲಿ. ಇದಕ್ಕಿಂತ ಚೆನ್ನಾಗಿ ಈ ಬಾರಿ ಶುಭ ಕೋರುವ ಪರಿ ನನಗೆ ತಿಳಿಯುತ್ತಿಲ್ಲ.
Keywords: Hindutwa, Bharat Darshan, Indianisation, RSS, VHP, Hindu, History of India, Simi, Republic Day of India
2 comments:
Good job
ಅಕ್ಷಯ್ ನಿಮ್ಮ ಲೇಖನಗಳನ್ನು ನೋಡಿ ಖುಷಿಯಾಯಿತು. ದೇಶ, ಭಾಷೆ, ಧರ್ಮ ಭಾರತೀಯತೆಯ ಬಗ್ಗೆ ಪ್ರೇಮವಿರುವ ಬೌದ್ದಿಕ ವರ್ಗವೇ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ತಮ್ಮಂತಹವರು ವಿರಳ.
ಎಲ್ಲ ಪ್ರಾಕಾರಗಳಲ್ಲು ಈ ಧರ್ಮವಿರೋಧಿ ರಾಷ್ಟ್ರವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಂಪದ.ನೆಟ್ ನಲ್ಲೂ ತಾವು ಸದಸ್ಯರಾಗಿ ತಮ್ಮ ಕೆಲ ಲೇಖನಗಳನ್ನು ಬರೆಯಿರಿ
Post a Comment