Thursday, 11 December 2008

ನಮ್ಮ ಗೃಹಮಂತ್ರಿ ಕೂಡ ಬ್ಲಾಗರ್!!


ನಾನು ಯಾವುದೋ ಸಾಮಾನ್ಯ ಬ್ಲಾಗರ್ ಬಗ್ಗೆ ಬರೆದು ಲಿಂಕ್ ಕೊಡುತ್ತಿಲ್ಲ. ಕರ್ನಾಟಕದ ಗೃಹ ಮಂತ್ರಿ ವಿ. ಎಸ್. ಆಚಾರ್ಯಯವರ ಬ್ಲಾಗ್ ಇದು. ನಿಜ. ಕರ್ನಾಟಕದ ಗೃಹ ಮಂತ್ರಿ ಕೂಡ ಬ್ಲಾಗರ್. ಅಂತೂ ರಾಜಕಾರಿಣಿಗಳೂ, ಮಂತ್ರಿಗಳೂ ಬ್ಲಾಗಿಂಗ್ ಮಾಡುತ್ತಿರುವುದು ಹೆಮ್ಮೆಯ ಸಂಗತಿಯೇ. ಅವರ ಬ್ಲಾಗ್ ನೋಡಿದರೆ ಸಾಕು ಪಕ್ಕ ಜನಸಂಘದ ವಿಚಾರಧಾರೆಗಳು ನೆನಪಾದವು. (ನಾನು ಜನಸಂಘ ಇರುವಾಗ ಇನ್ನೂ ಹುಟ್ಟಿಯೇ ಇರದಿದ್ದರೂ ನಮ್ಮೂರಿನ ಅರೆಸ್ಸೆಸ್ಸ್ ಹಿರಿತಲೆಗಳ ಮಾತು ಕೇಳಿ ಅನುಭವ.) ಸಾರ್ವಜನಿಕವಾಗಿ ವ್ಯಕ್ತವಾದ ಅಭಿಪ್ರಾಯ ದೊಡ್ಡ ಧ್ವನಿಯಲ್ಲಿ ಹೇಳಲೂ ಈಗ ತಾಕತ್ತು ಬೇಕಾದ ಪರಿಸ್ಥಿತಿ. ಅಂತದ್ದರಲ್ಲಿ ಗೃಹ ಮಂತ್ರಿಗಳು ನಮ್ಮ ಸಿಕ್ಕಾಪಟ್ಟೆ ಬುದ್ಧಿಜೀವಿಗಳ ಬಗ್ಗೆಲ್ಲಾ ಬರೆದಿದ್ದರೆಂದರೆ ಜನರ ಕೂಗು ಅವರಿಗೆ ಕೇಳಿದೆ ಎಂದಲ್ಲವೇ? ಹೀಗೇಕೆ ಹೇಳಿದೆನೆಂದರೆ ಈಗಿನ ಬಿಜೆಪಿಯಲ್ಲಿ ವಲಸೆ ಬಂದವರೇ ಹೆಚ್ಚಲ್ಲವೇ? ಅಕ್ರಮ ವಲಸೆ ಎಂದುಕೊಂಡು ಎಬಿವಿಪಿಯವರು ವಿರೋಧಿಸದೆ ಇರುವುದು ಬಿಜೆಪಿ ಪುಣ್ಯ. ಅದೆಲ್ಲ ಇಲ್ಲಿ ಸಲ್ಲುವ ಮಾತುಗಳಲ್ಲ. ಗೃಹ ಮಂತ್ರಿ ಬ್ಲಾಗ್ ಇಟ್ಟಿದ್ದಾರೆನ್ನುವುದೇ ಲೇಖನದ ವಿಷಯ.

ಆಚಾರ್ಯ ಎಷ್ಟೇ ಮುತ್ಸದ್ದಿಯಾದರೂ ಗೃಹ ಮಂತ್ರಿ ಸ್ಥಾನಕ್ಕೆ ತಕ್ಕವರಲ್ಲ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. (ಜೊತೆಗೆ ಯಡ್ಯೂರಪ್ಪ ಇವರನ್ನೇ ಹೊರತುಪಡಿಸಿ ಎಲ್ಲರ ಅನಿಸಿಕೆ ಕೂಡ.) ಅದರೂ ಅವರ ಕೆಲವು ವಯಕ್ತಿಕ ವಿಚಾರ ಓದಿ ಇಂಥವರು ನಮ್ಮ ಮಂತ್ರಿಯಾಗಿರುವುದು ಹೆಮ್ಮೆ ಎನಿಸಿತು. ಒಂದಂತೂ ಸತ್ಯ- ಇಂಥ ರಾಜಕಾರಿಣಿಗಳು ಮೂಲ ಬಿಜೆಪಿಯಿಂದ ಮಾತ್ರ ಬರಲು ಸಾಧ್ಯವೇನೋ! ಹೀಗೇಕೆ ಹೇಳಿದೆನೆಂದರೆ ನಾನು ನೋಡಿದ ಹಾಗೆ ಅಂತರ್ಜಾಲದಲ್ಲಿ ಹೆಚ್ಚು ಚರ್ಚೆಗೆ ಒಳಗಾದವರೆಂದರೆ ಮೊದಿಯೇ. ಅವರ ವೆಬ್ಸೈಟ್ ಹೊರತುಪಡಿಸಿಯೇ ಅವರಿಗೆ ಇನ್ನೂ ಹಲವಾರು ಸೈಟ್ ಗಳಿವೆ. ಅದರಲ್ಲಿ ನಮೋ (ನರೇಂದ್ರಮೋದಿ) ಲೀಗ್ ಒಂದು. ಅಂತರ್ಜಾಲ ಉಪಯೋಗಿಸಿದಾಕ್ಷಣ ದೇಶ ಉದ್ಧಾರ ಆಗಿಬಿಡುವುದು, ಮುಂದಿನ ಸಲ ಇವರೇ ಗೆದ್ದು ಬರುತ್ತಾರೆನ್ನುವುದೂ ನನ್ನ ತರ್ಕವಲ್ಲ. ಆದರೂ ಭಾರತೀಯ ರಾಜಕಾರಿಣಿಗಳೂ ತಂತ್ರಜ್ಞಾನ ಒಗ್ಗೂಡಿಸಿಕೊಳ್ಳುತ್ತಿದ್ದರೆನ್ನುವುದೇ ಹೊಸ ವಿಷಯ.

ಅಷ್ಟಕ್ಕೂ ಮಂತ್ರಿಗಳಿಗೆ ಅದೇಗೆ ಅಷ್ಟು ಕ್ರಿಯಾತ್ಮಕ ಬ್ಲಾಗ್ ಇಡುವುದು ಸಾದ್ಯವಾಯಿತೋ ಗೊತ್ತಿಲ್ಲ. ಗಾಂಧೀಜಿಯವರು ತಮ್ಮ ಲೇಖನ ಟೈಪ್ ಮಾಡಲು ಸ್ಟೆನೋ ಇಟ್ಟುಕೊಂಡಂತೆ ಬ್ಲಾಗಿಂಗ್ ಮಾಡಲು ಯಾರನ್ನು ನೇಮಿಸಿದ್ದಾರೋ ಗೊತ್ತಿಲ್ಲ. ಆದರೂ ಸ್ವಲ್ಪವಾದರೂ ಪುರಸೊತ್ತು ಮಾಡಿಕೊಂಡು ಬ್ಲಾಗಿಂಗ್ ಮಾಡುತ್ತಿದ್ದಾರೆಲ್ಲ ಅದೇ ಬ್ಲಾಗರ್ಸ್ಗಳಿಗೆಲ್ಲ ಹೆಮ್ಮೆ.

Keywords: Home minister, Karnataka, Blog, Narendra Modi, Politicians, Websites, Technology
, V S Acharya

No comments:

Search Rising Indian


Related Posts Plugin for WordPress, Blogger...