Tuesday 23 December 2008

ದೀಪಿಕಾ ಪಡುಕೋಣೆ- ಮನೆ ಮರೆತ ಮದನಾರಿ

ಆವತ್ತು ಓಂ ಶಾಂತಿ ಓಂ ನೋಡುತ್ತಿದ್ದ ಬೆಂಗಳೂರಿನ ಜನ, ದೀಪಿಕಾ ಪಡುಕೋಣೆ ತಾನು ಬೆಂಗಳೂರಿನಿಂದ ಬಂದವಳು ಎಂದು ಡೈಲಾಗ್ ಹೊಡೆಯುತ್ತ ಎಂಟರ್ ಆಗುತ್ತಿದ್ದಂತೆ ಹೋ ಎಂದು ಕಿರುಚಿದ್ದನ್ನು ನೋಡಬೇಕಿತ್ತು. ನಮ್ಮೂರಿನ ಹುಡುಗಿ ಎಂಬ ಅಭಿಮಾನ ನಮ್ಮವರಿಗೆ. ಆದರೆ ಅದೇ ಅಭಿಮಾನ ದೀಪಿಕಾಗೂ ಇರಬೇಕಿತ್ತಲ್ಲ? ಪಾಪ ಬಾಲಿವುಡ್ ಯಶಸ್ಸು, ಹಾದಿ ಬೀದಿಗಳ ಬೋರ್ಡ್ ಮೇಲೆಲ್ಲಾ ಬಿಎಸ್ಸೇನ್ನೆಲ್ ಜಾಹೀರಾತುಗಳಲ್ಲಿ ರಾರಾಜಿಸುವಂತಾದಮೇಲೆ ಮನೆ ನೆನಪಾಗಬೇಕಲ್ಲ? ಅವಳ ತಪ್ಪಲ್ಲ ಬಿಡಿ. ಸಿಕ್ಕಾಪಟ್ಟೆ ಮೈಮಾಟ ತೋರಿಸಿ ಎಕ್ಸ್ಪೋಸ್ ಮಾಡಿ ಗಳಿಸಿದ ಯಶಸ್ಸನ್ನೇನು ಕನ್ನಡಕ್ಕೆ ಹಂಚಲು ಅವಳಿಗೇನು ಹುಚ್ಚೆ? ಹೇಗಿದ್ದಳು ಹೇಗಾದಳು ಎಂದು ಮಾತನಾಡಿಕೊಂಡವರು ನಾವೇ ಅಲ್ಲವೇ?

ವಿಷಯ ಏನಿಲ್ಲ. ಸಿಂಪಲ್. ದೀಪಿಕಾ ಪಡುಕೋಣೆಗೆ ಮನೆ ಹೆಸರೇ ಮರೆತು ಹೋಗಿದೆಯಂತೆ. ಕನ್ನಡದ ಚಿತ್ರೋದ್ಯಮಕ್ಕೆ ಸ್ಯಾಂಡಲ್ವುಡ್ ಅನ್ನುವುದು ಮರೆತುಹೋಗುವಷ್ಟು ಸೊಕ್ಕಿದ್ದಾಳಂತೆ. ಅದೂ ಬೆಂಗಳೂರಿನಲ್ಲೇ ಹಾಗೆಂದಿರುವುದು! ಟೋಟಲ್ ಮಳಿಗೆಯ ಲೆವಿಸ್ ಶೋ ರೂಮ್ ಆರಂಬ್ಹೊತ್ಸವಕ್ಕೆ ಬಂದಾಕೆಗೆ ಪತ್ರಕರ್ತರು ಸ್ಯಾಂಡಲ್ ವುಡ್ ಚಿತ್ರಕ್ಕೆ ವಾಪಸ್ ಬರುವ ಆಲೋಚನೆಯೇನದರೂ ಇದೆಯಾ ಎಂದು ಕೇಳಿದ್ದಾರೆ. ಅವಳಿಗೆ ಸ್ಯಾಂಡಲ್ ವುಡ್ ಅಂದ್ರೆ ಏನೂ ಅಂತಾನೆ ಮರೆತೋಗಿದೆ. ಹಾಗೆಂದರೆ ಏನೆಂದು ತಿರುಗಿ ಪತ್ರಕರ್ತರನ್ನೇ ವಿಚಾರಿಸಿ ಯಾವಾಗಿಂದ ಕನ್ನಡ ಚಿತ್ರೋದ್ಯಮ ಹೆಸರು ಬದಲಾಯಿಸಿಕೊಂಡಿತೆಂದು ವಿಚಾರಿಸಿದ್ದಾಳೆ. ಇಂಗ್ಲಿಷ ಪತ್ರಕರ್ತರಾಗಿದ್ದಕ್ಕೆ ಅಸ್ಟಾದರೂ ಮಾತನಾಡಿದ್ದಾಳೆ. ಆದರೂ ಪತ್ರಕರ್ತರು ಸುಸ್ತಾಗಿದ್ದಾರೆ. ಇದೆಲ್ಲ ಆಗಿದ್ದು ಡಿಸೆಂಬರ್ ೧೯ ರಂದು ಎಂದು ಡಿ.ಏನ್.ಎ ವರದಿ ಮಾಡಿದೆ. ಅದನ್ನೋದಿದ ಕನ್ನಡಿಗರು ಪೆಚ್ಚಾಗಿದ್ದಾರೆ.

ಕನ್ನಡದಿಂದ ಅದೆಷ್ಟು ಜನ ತನ್ನ ಜೀವನ ಆರಂಭಿಸಿ ಮನೆ ಮರೆತಿಲ್ಲ. ಅದರಲ್ಲಿ ಇದು ಹೊಸ ಸೇರ್ಪಡೆ. ಸಧ್ಯಕ್ಕೆ ಅದೇ ಪತ್ರಿಕೆ ಜೆನ್ನಿಫರ, ಧ್ಯಾನ್, ಪೂಜಾ ಗಾಂಧೀ ಮತ್ತಿತರನ್ನೂ ಮಾತನಾಡಿಸಿ ನೋಡಿದಾಗ ಅವರ ಪ್ರತಿಕ್ರಿಯೆ ನೋಡಿ ಅವರಾದರೂ ನೆನಪಿಟ್ಟುಕೊಂಡಿದ್ದಾರೆಲ್ಲ ಅಂತ ಸಮಾಧಾನ ಆಯಿತಷ್ಟೆ.

Keywords: Deepika Padukone, Journalists, Kannada film, Bollywood, Om shanti om, BSNL, Expose

2 comments:

Anonymous said...

Nice title

Unknown said...

She has forgotten where she borned. Hope she may decide where she dies

Search Rising Indian


Related Posts Plugin for WordPress, Blogger...