Friday, 30 April 2010

Jonathan Livingston Seagull ಅರ್ಥ ಮಾಡಿಕೊಳ್ಳಲು ಪರದಾಟ!

ಜೊನಾಥನ್ ಲಿವಿಂಗ್ ಸ್ಟನ್ ಸೀಗಲ್ ಎನ್ನುವ ಒಂದು ಪುಸ್ತಕ ಇದೆ. ಇದರ English e-ಅವತರಣಿಕೆ ಸಿಕ್ಕು ಮೂರ್ನಾಲ್ಕು ವರ್ಷಗಳೇ ಆದವು. computer ಎದುರು ಕುಳಿತು ಓದಿದ್ದು ಓದಿದ್ದು. ಏನೊಂದು ಅರ್ಥ ಆಗಿರಲಿಲ್ಲ. At least ಕಥೆಯಾದರೂ ಅರ್ಥ ಆಗುವುದು ಬೇಡವೇ? ಅದು ಆಗಲಿಲ್ಲ. ನನಗೆ English ಬರುವುದಿಲ್ಲವೋ ಅಥವಾ ಕಥೆ ಓದಲು ಬರುವುದಿಲ್ಲವೋ ತಿಳಿಯಲಿಲ್ಲ. ಅದನ್ನ English Literature ಓದಿದ ಗೆಳತಿಯೊಬ್ಬಳಿಗೆ ಕೊಟ್ಟು ಸ್ವಲ್ಪ ಸಹಾಯ ಬೇಡಿಯೂ ಆಯಿತು. ಮೊದಲೇ ಆ ಕಥೆಯಲ್ಲಿನ motivation ಏನೆಂದೇ ತಿಳಿಯದವನಿಗೆ ಈ ಕಥೆ ಒಂದು ಅಧ್ಯಾತ್ಮಿಕ ಪುಸ್ತಕ ಅಂದಾಗ ಮೈ ಪರಚಿಕೊಳ್ಳುವಂತೆ ಆಗಿತ್ತು.
ಮೊನ್ನೆ ಗಾಂಧಿ ನಗರದ ಚೈತ್ರ book house ಗೆ ಹೋದಾಗ ಸೀಗಲ್ ಕನ್ನಡ ಅವತರಣಿಕೆ ಕಣ್ಣಿಗೆ ಬಿಟ್ಟು. Richard Bach ಬರೆದ ಪುಸ್ತಕವನ್ನು ಎಂ ಎಲ್ ರಾಘವೇಂದ್ರ ರಾವ್ ಅನುವಾದಿಸಿದ್ದಾರೆ. ಪುಸ್ತಕ ನೋಡಲು ತುಂಬಾ ಮುದ್ದಾಗಿದೆ. ಒಂದೆರಡು ಪುಟ ತಿರುವಿದಾಕ್ಷಣ ತುಂಬಾ ಸರಳವಾಗಿ ಅನುವಾದಿಸಿದ್ದಾರೆ ಅನಿಸಿತು. ಕನ್ನಡದಲ್ಲೇ ಓದಿ ನೋಡೋಣ ಅಂದುಕೊಂಡು ೩೦ ರೂಪಾಯಿಯ ೫೫ ಪುಟಗಳ ಪುಸ್ತಕ ಕೊಂಡು ತಂದೆ. ಪುಸ್ತಕದ ತುಂಬಾ ಚಿತ್ರಗಳು. ದೊಡ್ಡ ದೊಡ್ಡ ಅಕ್ಷರಗಳು. ಚಿಕ್ಕ ಮಕ್ಕಳ ಕಥೆ ಪುಸ್ತಕದ ತರಹ ಇದೆ.
ನಾನು ಚಿಕ್ಕ ಮಕ್ಕಳು ಓದುವ ತರಹವೇ ಓದಿದ್ದು. ಅವರಿಗೂ ಅಸ್ಟೇ ಕಥೆ ಅರ್ಥವಾದರೆ ಆಯಿತು. ಅದರಲ್ಲಿನ theme ಕಟ್ಟಿಕೊಂಡು ಏನಾಗಬೇಕು? ಜೊನಾಥನ್ ಅನ್ನುವ ಸಮುದ್ರ ಕಾಗೆಯ ಕಥೆ. ಆಕಾಶದಲ್ಲಿ ಹಾರುತ್ತಾ ತೆಲಬೇಕೆಂಬ ಆಸೆ ಅದಕ್ಕೆ. ಆದರೆ ಅದರ ಗುಂಪಿಗೆ ಹೊಸದನ್ನು ಮಾಡುವ ಇಷ್ಟವಿಲ್ಲ. ಸಮುದ್ರದ ದಡದಲ್ಲಿ ಬೆಸ್ತರು ಹಿಡಿದು ತರುವ ಮೀನಿನ ಮೇಲೆ ಕಣ್ಣು. ಅಸ್ಟೇ ಆದರೆ ಅದು ಒಂದು ಜೀವನವೇ ಎನ್ನುವ ಹುಡುಗ ಜೊನಾಥನ್. ನೂರಾರು ಮೀಟರ್ ಎತ್ತರಕ್ಕೆ ನೋವಾದ ರೆಕ್ಕೆಯನ್ನು ಲೆಕ್ಕಿಸದೆ ಹಾರಿ ಹಾರಿ ಯಾವ ಸೀ ಗಲ್ ಮಾಡದ ಕೆಲಸ ಮಾಡಿದ್ದಕ್ಕೆ ಸಿಕ್ಕ ಉಡುಗೊರೆ ಎಂದರೆ- ಅವರ ಜಾತಿಯಿಂದಲೇ ಬಹಿಷ್ಕಾರ. ಆದರು ಬೆನ್ನು ಬಿಡದೆ ಛಲ ಸದಿಸುತ್ತಾನೆ ಜೊನಾಥನ್. ಕೊನೆಗೆ ಅವನಿಗೆ ಫ್ಲೆಚರ್ ಎನ್ನುವ ಶಿಷ್ಯ ದೊರೆಯುತ್ತಾನೆ. ಅವನ ಹಿಂದೆ ನೂರಾರು ಹಿಂಬಾಲಕರು ಸಿಗುತ್ತಾರೆ.
ಕಥೆ ಮೇಲ್ನೋಟಕ್ಕೆ ಇಸ್ಟೇ. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ಮಾತ್ರ ಹರ ಸಾಹಸ ಮಾಡುತ್ತಿದ್ದೇನೆ. ಇನ್ನು ನಾಲ್ಕು ಬರಿ ಓದಿದ ಮೇಲೇ ಅದರಲ್ಲಿರುವ ಆಧ್ಯಾತ್ಮ ಅರ್ಥವಾಗಬಹುದು ಅಂದುಕೊಂಡಿದ್ದೇನೆ.
ಹಾಗೆಯೇ Alchemist ಕೂಡ. ಕಥೆ ಒಂದೆ. ಆದರೆ ನಾವು ಓದುವ ಮನೋ ಮಟ್ಟದ ಆಧಾರದ ಮೇಲೆನಮಗೆ ಅದರ ತಿರುಳು ಅರ್ಥವಾಗುತ್ತದೆ. ಮೊದಲ ಬಾರಿ ಓದಿದಾಗ Santiago ಸೂರ್ಯನ ಬಳಿ ಮಾತನಾಡುತ್ತಾನೆ ಅನಿಸಿದರೆ ಎರಡನೇ ಬಾರಿ ಓದುವಾಗ ಇನ್ನೇನೋ ಅರ್ಥವಾಗುತ್ತದೆ. ಮತ್ತೂ ಓದಿದರೆ ಶಂಕರರ ಅಹಂ ಬ್ರಹ್ಮಾಸ್ಮಿ ಅರ್ಥ ಕೊಡುತ್ತದೆ. ಪ್ರತೀ ಬಾರಿ ಓದುವಾಗಲೂ ಇವು ಹೊಸತಾಗಿಯೆ ಇರುತ್ತವೆ. ಅದಕ್ಕೆ ಈಗ ಆರನೇ ಬಾರಿ ಓದುತ್ತಿರುವುದು.

1 comment:

Search Rising Indian


Related Posts Plugin for WordPress, Blogger...