ಅಂತೂ ಇಂತೂ ಶಿವರಾಜ್ ಪಾಟೀಲ್ ರಾಜೀನಾಮೆ ಕೊಟ್ಟರಂತೆ ಅನ್ನೋ ಸುದ್ದಿ ಕೇಳಿ ಸ್ವಲ್ಪ ನೆಮ್ಮದಿಯಾಯಿತು. ಏಕೆಂದರೆ ಇನ್ನೊಮ್ಮೆ ಟೆರರ್ ಅಟಾಕ್ ಅದಾಗ ಪಾಟೀಲ್ರ ಅದೇ ಬಾಯಿಪಾಠ ಮಾಡಿದಂತ ಮಾತುಗಳನ್ನ ಇನ್ನಾದರೂ ಕೇಳುವುದು ತಪ್ಪಿತಲ್ಲ ಎನ್ನುವ ಸಂತೋಷ. ಪಾಪ ಬಡಪಾಯಿ ಮನುಷ್ಯರನ್ನೆಲ್ಲ ಅಂಥ ಸ್ಥಾನದಲ್ಲಿ ಇಟ್ಟರೆ ಇನ್ನೆನಾಗಲು ಸಾಧ್ಯ? ನಮ್ಮ ರಾಜ್ಯದ ಹೋಂ ಮಿನಿಸ್ಟರ್ ಕಥೇನೂ ಅಸ್ಟೇ ಅಲ್ವೇ?
ಸೋನಿಯಾ ಗಾಂಧಿಗೆ ಸಿಕ್ಕಾಪಟ್ಟೆ ನಿಯತ್ತಿನ ಮನುಷ್ಯ ಅಂತ ಹೋಂ ಮಿನಿಸ್ಟರ್ ಮಾಡಿದ್ರೆ ದೇಶ ಸಂಭಾಳಿಸುವ ಚಾಲಾಕಿತನ ಎಲ್ಲಿಂದ ಬರಬೇಕು? ಶಿವರಾಜ್ ಪಾಟೀಲರನ್ನ ಅಬ್ದುಲ್ ಕಲಾಮ್ ಅವಧಿ ಮುಗಿದಾಗ ರಾಷ್ಟ್ರಪತಿ ಮಾಡುವ ಆಲೋಚನೆ ಇತ್ತಂತೆ. ಆದರೆ ಎಡ ಪಕ್ಷಗಳ ವಿರೋಧದಿಂದ ಅದು ಸಾಧ್ಯವಾಗಲಿಲ್ಲವಂತೆ. ಅವರಿಗೆ ಅದೇ ಯೋಗ್ಯವಾಗಿತ್ತು. ಹೆಬ್ಬೆಟ್ಟು ಒತ್ತುವ ಕೆಲಸ ಸರಿಯಾಗಿ ಮಾಡುತ್ತಿದ್ದರೇನೋ? ಅದರೂ ರಾಜೀನಾಮೆಗೆ ಇಷ್ಟೊಂದು ಬಾಂಬ್ ದಾಳಿಗಳು ಬೇಕಾಗಿತ್ತಾ?
ನಮ್ಮ ವಿ. ಎಸ್ ಆಚಾರ್ಯರ ಕಥೆಯೂ ಬೇರೆ ಏನಲ್ಲ. ಗೋವಿನಂಥ ಮನುಷ್ಯ ಅನ್ನುವುದು ಮಾತಿನಲ್ಲೇ ತಿಳಿಯುತ್ತದೆ. ಪೋಲಿಸ್ ಠಾಣೆಯಲ್ಲೇ ಉಲ್ಟಾ ಧ್ವಜ ಹಾರಿಸಿದ್ದಕ್ಕೆ ಟಿವಿ ಕಾರ್ಯಕ್ರಮದಲ್ಲಿ ದೂರು ನೀಡಿದರೆ ಒಂದೊಂದ್ಸಲ ತಪ್ಪಾಗುತ್ತದೆ ಎನ್ನುವಷ್ಟು ಒಳ್ಳೆಯವರು. ಇವರು ರಾಜೀನಾಮೆ ನೀಡಲು ಕರ್ನಾಟಕದಲ್ಲಿ ಇನ್ನೇನೇನಾಗಬೇಕೋ?
No comments:
Post a Comment